ಲಿಂಗಸುಗೂರು : ಶುದ್ಧ ಕುಡಿವ ನೀರು ಪೂರೈಕೆಗೆ ಒತ್ತಾಯ
ಲಿಂಗಸುಗೂರು : ಪುರಸಭೆ ವ್ಯಾಪ್ತಿಯ ಕರಕಡಕಲ್, ಕಸಬಾಲಿಂಗಸುಗೂರು, ಹುಲಿಗುಡ್ಡ ಹಾಗೂ ಲಿಂಗಸುಗೂರು ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವಂತೆ ಮುಸ್ಲಿಂ ಖಬರಸ್ತಾನ್ ಕಮೀಟಿ ಕಾರ್ಯಕರ್ತರು ಒತ್ತಾಯಿಸಿದರು.
ಪುರಸಭೆ ಮುಖ್ಯಾಧಿಕಾರಿ ನರಸಪ್ಪ ತಶೀಲ್ದಾರ್‍ಗೆ ಮನವಿ ಸಲ್ಲಿಸಿದ ಅವರು, ನಳಗಳಲ್ಲಿ ಪೂರೈಕೆಯಾಗುತ್ತಿರುವ ಕುಡಿಯುವ ನೀರು ದುರ್ವಾಸನೆಯಿಂದ ಕೂಡಿರುತ್ತವೆ. ಮೂರ್ನಾಲ್ಕು ದಿನಗಳಿಗೊಮ್ಮೆ ಬಿಡುವ ನೀರು ಫಿಲ್ಟರ್ ಆಗದೆ ದುರ್ವಾಸನೆಯಿಂದ ಕೂಡಿರುತ್ತವೆ. ಪರಿಣಾಮ ನೀರು ಕುಡಿಯಲು ಆಗುತ್ತಿಲ್ಲ. ಈ ಬಗ್ಗೆ ಕೂಡಲೇ ಕ್ರಮಕ್ಕೆ ಮುಂದಾಗಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕೆಂದು ಆಗ್ರಹಿಸಿದರು.
ಸಂಘಟನೆ ಅದ್ಯಕ್ಷ ನಸೀರ್ ಅಹ್ಮದ್, ಅಲ್ಲಾಬಕ್ಷ ಮನಿಯಾರ್, ಮುನವರುದ್ದೀನ್ ಖಾಜಿ, ಇರ್ಶಾದ್ ಅಹ್ಮದ್, ಸಿರಾಜ್‍ಅಹ್ಮದ್, ರಿಯಾಜ್ ಅಹ್ಮದ್, ಇಮ್ತೆಯಾಜ್ ಪಾಷಾ, ಸಲೀಮ್ ಅಹ್ಮದ್, ಖಾಜಾಹುಸೇನ್‍ಸಾಬ ಸೇರಿ ಇತರರು ಇದ್ದರು.

