ಸಾಯಿ ಮಂದಿರದಲ್ಲಿ ಉಚಿತ ಯೋಗ ಶಿಬಿರ
ಲಿಂಗಸುಗೂರು : ಸ್ಥಳೀಯ ಶಿರಡಿ ಶ್ರೀಸಾಯಿ ಮಂದಿರದಲ್ಲಿ ಸಾರ್ವಜನಿಕರಿಗೆ ಉಚಿತ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಮಂದಿರ ಸಮಿತಿಯ ಅದ್ಯಕ್ಷ ಎಂ.ಪ್ರತಾಪಶೆಟ್ಟಿ, ಪ್ರೋ.ಚಂದ್ರಶೇಖರ ಪಾಟೀಲ್ ಶಿಬಿರವನ್ನು ಉದ್ಘಾಟಿಸಿದರು. 60ಕ್ಕೂ ಹೆಚ್ಚು ಶಿಬಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಯೋಗಾಭ್ಯಾಸ ಸದೃಢ ಆರೋಗ್ಯಕ್ಕೆ ಸಹಕಾರಿ. ಪ್ರತಿಯೊಬ್ಬರೂ ಯೋಗಿಗಳಾಗಿ ರೋಗದಿಂದ ಮುಕ್ತಿ ಪಡೆಯಬೇಕೆಂದು ಪ್ರೊ.ಚಂಪಾ ಕರೆ ನೀಡಿದರು.
ಯೋಗಗುರು ಈರಣ್ಣ ಸ್ವಾಮಿ, ಬಸವಲಿಂಗಯ್ಯ ಹಿರೇಮಠ ಸೇರಿ ಇತರರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

