ರಾಯಚೂರು

ಏ.20ರ ವರೆಗೂ ಎನ್‍ಆರ್‍ಬಿಸಿಗೆ ನೀರು ಬಿಡಲು ಸಮ್ಮತಿ : ಹೂಲಗೇರಿ

ಲಿಂಗಸುಗೂರು : ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಗೆ ಏಪ್ರಿಲ್ 20ರ ವರೆಗೆ ನೀರು ಹರಿಸಲು ನೀರಾವರಿ ಸಚಿವರು ಸಮ್ಮತಿ ನೀಡಿದ್ದಾರೆಂದು ಶಾಸಕ ಡಿ.ಎಸ್.ಹೂಲಗೇರಿ ತಿಳಿಸಿದರು.

ಸ್ಥಳೀಯ ಪತ್ರಿಕಾ ಭವನದಲ್ಲಿ ಬುಧವಾರ
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಲದಂಡೆ ಕಾಲುವೆ ಅಚ್ಚುಕಟ್ಟು ಪ್ರದೇಶದ ರೈತರ ಎರಡನೇ ಬೆಳೆಗೆ ಏಪ್ರಿಲ್ 20ರ ವರೆಗೆ ನೀರು ಹರಿಸುವಂತೆ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರವಾರಿ ಸಲಹಾ
ಸಮಿತಿ ಅದ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರಿಗೆ ಮನವಿ ಸಲ್ಲಿಸಲಾಗಿತ್ತು.

ಮನವಿಗೆ ಸ್ಪಂಧಿಸಿರುವ ಸಚಿವರು, ನಾಲ್ಕು ದಿನಗಳ ಚಾಲೂ ಪದ್ಧತಿಯಲ್ಲಿ ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ಒಟ್ಟಾರೆಯಾಗಿ 3.60 ಟಿ.ಎಂ.ಸಿ. ನೀರನ್ನು ಏಪ್ರಿಲ್ 1 ರಿಂದ ಒದಗಿಸಬೇಕು. ನಾರಾಯಣಪುರ ಬಲದಂಡೆ ಕಾಲುವೆಗೆ ಏಪ್ರಿಲ್ 1 ರಿಂದ 5ರ ವರೆಗೆ ಬಂದ್ ಪದ್ಧತಿ, ಏಪ್ರಿಲ್ 6 ರಿಂದ 9ರ ವರೆಗೆ ಚಾಲೂ ಪದ್ಧತಿ
ಅನುಸರಿಸುವ ಜೊತೆಗೆ ನೀರಿನ ಲಭ್ಯತೆಗೆ ಅನುಗುಣವಾಗಿ ರೈತರ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆಂದು ಶಾಸಕರು ಹೇಳಿದರು.

ತಾಲೂಕು ಉಪನೋಂದಣಾಧಿಕಾರಗಳ ಕಚೇರಿಗೆ ಈಗಾಗಲೇ ನಿವೇಶನ ಗುರುತಿಸಲಾಗಿದ್ದು, ಶೀಘ್ರ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಶಾಸಕ ಹೂಲಗೇರಿ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಭೂಪನಗೌಡ ಕರಡಕಲ್, ಪುರಸಭೆ
ಉಪಾದ್ಯಕ್ಷ ಮೊಹ್ಮದ್ ರಫಿ ಇದ್ದರು

Leave a Reply

Your email address will not be published. Required fields are marked *

error: Content is protected !!