2ಎ ಮೀಸಲಾತಿ ಕೋರಿ ಪಂಚಮಸಾಲಿ ಸಮಾಜದ ಮುಖಂಡರ ಪ್ರತಿಭಟನೆ
ಲಿಂಗಸುಗೂರು : 2-ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ತಾಲೂಕಾ ಪಂಚಮಸಾಲಿ ಸಮಾಜ ಟ್ರಸ್ಟ್ ವತಿಯಿಂದ ಪ್ರತಿಭಟನೆ ಮಾಡಲಾಯಿತು.
ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಕರ್ನಾಟಕದಲ್ಲಿ ಸುಮಾರ 80ಲಕ್ಷ ಜನಸಂಖ್ಯೆ ಹೊಂದಿರುವ ಪಂಚಮಸಾಲಿ ಸಮಾಜ ವೃತ್ತಿಯಲ್ಲಿ ವ್ಯವಸಾಯ ನಂಬಿ ಜೀವನ ಸಾಗಿಸುತ್ತಿದ್ದು ಆರ್ಥಿಕ, ಶೈಕ್ಷಣಿಕ, ಸಮಾಜಿಕ ಕ್ಷೇತ್ರದಲ್ಲಿ ತೀರಾ ಹಿಂದುಳಿದ ಸಮಾಜವಾಗಿದ್ದು ಸಮಾಜದ ಯುವ ಪೀಳಿಗೆಯಲ್ಲಿ ಪ್ರತಿಭಾವಂತರಿದ್ದು ಮೀಸಲಾತಿಯಿಂದ ಒಳ್ಳೆಯ ಶಿಕ್ಷಣ ಉದ್ಯೋಗ ಸಿಗದೆ ಯುವಕರು ದಾರಿ ತಪ್ಪುತ್ತಿದ್ದು ಸುಮಾರ 25 ವರ್ಷಗಳಿಂದ ನಮ್ಮ ಹಕ್ಕಾದ 2-ಎ ಮೀಸಲಾತಿ ಬೇಡಿಕೆಯನ್ನು ಇಟ್ಟು ಹೋರಾಟ ಮಾಡಿದರೂ ಸರಕಾರ ಸ್ಪಂದಿಸುತ್ತಿಲ್ಲಾ.
ಸಮಾಜದ ಗುರುಗಳಾದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಜಿಯವರು ಸಮಾಜಕ್ಕೆ 2-ಎ ಮೀಸಲಾತಿ ಪಡೆಯುವದರಿಂದ ಯುವ ಪಿಳಿಗಿಗೆ ಒಳ್ಳೆಯ ಶಿಕ್ಷಣ ಉದ್ಯೋಗ ಸಿಗುವ ಭರವಸೆಯಿಂದ ಮುಖ್ಯ ಮಂತ್ರಿ ಯಡಿಯೂರಪ್ಪನವರ ಲಿಂಗಾಯತ ಸಮಾಜದವರಾಗಿರುವದರಿಂದ ಪಂಚಮ ಸಾಲಿ ಸಮಾಜಕ್ಕೆ ನ್ಯಾಯ ಸಿಗಬಹುದೆಂದು ಚಳುವಳಿ ಪ್ರತಿಭಟನೆ ನಡೆಸಿದರು. ಸಿಎಂ ಆಶ್ವಾಸನೆಯಂತೆ ಪಾದಯಾತ್ರೆ ನಡೆಸಿದ್ದು ದಾವಣಗೇರಿಯಿಂದ ಹರಿಹರ ಪೀಠದ ಸಮಾಜದ ವಚನಾನಂದ ಸ್ವಾಮಿಗಳು ಪಾದಯಾತ್ರೆಯಲ್ಲಿ ಹೆಜ್ಜೆಹಾಕಿ 2-ಎ ಮೀಸಲಾತಿ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ. ಆದಾಗ್ಯೂ ಸರಕಾರ ಕಿವಿಗೊಡದೇ ಇರುವುದು ಖಂಡನೀಯ. ಕೂಡಲೇ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದರು.
ಪಂಚಮಸಾಲಿ ಸಮಾಜದ ಮುಖಂಡರಾದ ಶಂಕರಗೌಡ ಅಮರಾವತಿ, ರುದ್ರಗೌಡ ಮಾಲಿಪಾಟೀಲ್, ಮೌನೇಶ, ಮೌನೇಶ ಜಿಎಮ್, ಶಿವುಹಟ್ಟಿ, ಅಮರೇಶ ಮೇಟಿ, ವಿಜಯಕುಮಾರ ಹೊಸಗೌಡ್ರು, ವಿನೋದ ಗುರುಗುಂಟಾ, ವಿಜಯ ಮಾಲಿ ಪಾಟೀಲ್, ಬಸವರಾಜ, ನಾಗನಗೌಡ ಪಾಟೀಲ್, ವಿರೇಶ ತುಪ್ಪದ, ಖೈರವಾಡಗಿ, ಅಮರೇಶ ಮೇಟಿ, ಶ್ವೇತಾ ಲಾಲಗುಂದಿ ಸೇರಿ ಇತರರು ಪ್ರತಿಭಟನೆಯಲ್ಲಿ ಇದ್ದರು.

