ಕೃಷಿ ಕಾನೂನು ರದ್ದತಿಗೆ ರೈತ ಸಂಘ ಆಗ್ರಹ
ಲಿಂಗಸುಗೂರು : ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಹೊಸ ಕೃಷಿ ಕಾನೂನನ್ನು ಕೂಡಲೇ ರದ್ದುಗೊಳಿಸಬೇಕೆಂದು ಕರ್ನಾಟಕ ಜಾಗೃತ ರೈತ ಸಂಘದ ಕಾರ್ಯಕರ್ತರು ಆಗ್ರಹಿಸಿದರು.
ಶಿರಸ್ತೆದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು. ಸರಕಾರಿ ಸ್ವಾಮ್ಯದ ವಲಯದಗಳ ಆಸ್ತಿಗಳ ಖಾಸಗೀಕರಣ ನೀತಿ ನಿಲ್ಲಿಸಬೇಕು.
ರೈತರ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿ ಕರಷಿ ಮಾರುಕಟ್ಟೆಯನ್ನು ಬಲಪಡಿಸಬೇಕು. ಬೀಜ, ರಸಗೊಬ್ಬರ, ಔಷಧ ಬೆಲೆ ಹೆಚ್ಚಳ ತಡೆಗಟ್ಟಿ ರೈತರಿಗೆ ಕೃಷಿ ಸಬ್ಸಿಡಿಯನ್ನು ಮುಂದುವರೆಸಬೇಕು. ಜಿಲ್ಲೆಯ ತುಂಗಭದ್ರಾ-ಎನ್‍ಆರ್‍ಬಿಸಿ ಕಾಲುವೆಗಳ ದುರಸ್ತಿ ಹಾಗೂ ಎಲ್ಲಾ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. 5ಎ ಕಾಲುವೆಯ ಹನಿ ನೀರಾವರಿ ಯೋಜನೆ ಬದಲು ಹರಿ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಗಿ ಅನುಷ್ಟನಗೊಳಿಸಬೇಕು. ಗುಳೆ ತಡೆಯಲು ನರೇಗ ಕೂಲಿಯನ್ನು 500 ರೂಪಾಯಿಗೆ ಹೆಚ್ಚಿಸಬೇಕು ಸೇರಿ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಸಾಲಿ, ಮುಖಂಡರಾದ ವಿನಯಕುಮರ, ಮೌನೇಶ ತಳವಾರ, ಚನ್ನಬಸವ ಕರ್ನಾಟಗಿ, ರವಿ ಗುತ್ತೇದಾರ, ಸಿದ್ದಪ್ಪ ಪೂಜಾರಿ, ವಿರೇಶ ಸರ್ಜಾಪೂರ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

