ಚಿನ್ನದ ಗಣಿ ಕಾರ್ಮಿಕರಿಗೆ ಉತ್ಪಾದನಾ ಪ್ರೋತ್ಸಾಹ ಧನ ಪಾವತಿಗೆ ಒತ್ತಾಯ
ಲಿಂಗಸುಗೂರು : ಹಟ್ಟಿ ಚಿನ್ನದಗಣಿ ಕಾರ್ಮಿಕರಿಗೆ 2019-20ನೇ ಸಾಲಿನ ಉತ್ಪಾದನಾ ಪ್ರೋತ್ಸಾಹ ಧನ (ಪಿಎಲ್‍ಐಬಿ) ಪಾವತಿಸಬೇಕೆಂದು ಒತ್ತಾಯಿಸಿದರು.
ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್‍ರಿಗೆ ಗಣಿ ಸಿಬ್ಬಂಧಿ ಹಾಗೂ ಕಾರ್ಮಿಕ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿ, ಕಾರ್ಮಿಕರಿಗೆ ಪ್ರತಿವರ್ಷ ಆಡಳಿತವರ್ಗ ನಿಗದಿಪಡಿಸಿದ ಚಿನ್ನದ ಉತ್ಪಾದನೆಯ ಗುರಿಯ ಸಮೀಪಕ್ಕೆ ಅಥವಾ ಗುರಿ ತಲುಪಿದರೆ, ಸಂಘದೊಂದಿಗೆ ಚರ್ಚಿಸಿ ನಿಗದಿಪಡಿಸಿರುವ ಮೊತ್ತದ ಹಣ ಪಾವತಿ ಮಾಡಲಾಗುತ್ತಿತ್ತು. ಆದರೆ, ಈ ವರ್ಷ 2019-20ರಲ್ಲಿ ಕಾರ್ಮಿಕರಿಗೆ ಬರಬೇಕಾಗಿರುವ ಚಿನ್ನದ ಉತ್ಪಾದನಾ ಪ್ರೋತ್ಸಾಹಧನ 3-11-2020 ರಂದು 418ನೇ ನಿರ್ದೇಶಕರ ಮಂಡಳಿ ಸಭೆಯಲ್ಲಿ ಈ ವಿಷಯ ನಂದಾಗ ಮುಂದಿನ ನಿರ್ದೇಶಕರ ಮಂಡಳಿ ಸಭೆಯಲ್ಲಿ ಚರ್ಚೆಮಾಡಲು ಮುಂದೂಡಿರುವುದಾಗಿ ಆಡಳಿತವರ್ಗ ಕಾರ್ಮಿಕ ಸಂಘದ ಪ್ರತಿನಿಧಿಗಳಿಗೆ ತಿಳಿಸಿದ್ದರು. ಆದರೆ, ತಮ್ಮ ನೇಮಕದ ನಂತರ 7-12-2020 ರಂದು ನಡೆದ ನಿರ್ದೇಶಕ ಮಂಡಳಿ ಸಭೆಯಲ್ಲಿ ಕಾರ್ಮಿಕರ ಉತ್ಪಾದನಾ ಪ್ರೋತ್ಸಾಹ ಧನದ ವಿಷಯದ ಬಗ್ಗೆ ಮಂಡನೆಗೆ ತೆಗೆದುಕೊಳ್ಳದೇ ಇರುವುದು ಕಂಡುಬರುತ್ತಿದೆ.
ಚಿನ್ನದಗಣಿ ಕಾರ್ಮಿಕರಿಗೆ ಬರಬೇಕಾಗಿರುವ 2019-20ನೇ ಸಾಲಿನ ಚಿನ್ನದ ಉತ್ಪಾದನಾ ಪ್ರೋತ್ಸಾಹ ಧನ, ಸಂಘದೊಂದಿಗೆ ದ್ವಿಪಕ್ಷೀಯವಾಗಿ ಚರ್ಚಿಸಿ ನಿಗದಿಪಡಿಸಿದ ಮೊತ್ತದ ಹಣ ಪಾವತಿ ಮಾಡುವಂತೆ ಕೇವಲ ನಿರ್ದೇಶಕ ಮಂಡಳಿ ಸಭೆಯ ಅನುಮೋದನೆಯ ಅವಶ್ಯಕತೆ ಮಾತ್ರ ಇರುತ್ತದೆ. ಕೂಡಲೇ ಈ ಬಗ್ಗೆ ಚರ್ಚಿಸಿ ಅನುಮೋದನೆ ನೀಡಬೇಕೆಂದು ಒತ್ತಾಯಿಸಿದರು.
ಸಂಘದ ಅದ್ಯಕ್ಷ ರೇವಣಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಎಂಡಿ ಅಮೀರ್‍ಅಲಿ, ಮುಖಂಡರಾದ ಗುಡದಪ್ಪ ಭಂಡಾರಿ, ಮುರಳಿ ಮೋಹನ್, ಚನ್ನಪ್ಪ, ಮಹೆಬೂಬ ಬೈಚಬಾಳ, ಶೌಕತಲಿ, ರಾಘವೇಂದ್ರ, ಹನುಮಂತಗೌಡ ಗುರಿಕಾರ, ಜೈನುದ್ದೀನ್, ಮಹ್ಮದ್ ರಫಿ, ಡಿಕೆ ಲಿಂಗಸುಗೂರು ಸೇರಿ ಕಾರ್ಮಿಕ ಮುಖಂಡರು ಇದ್ದರು.

