ಲಿಂಗಸುಗೂರು : ಸೊಂಕು ನಿರ್ಮೂಲನೆಗೆ ರಾಸಾಯನಿಕ ಸಿಂಪರಣೆ
ಲಿಂಗಸುಗೂರು : ಮಹಾಮಾರಿ ಕೋವಿಡ್ ಸೊಂಕು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸ್ಥಳೀಯ ಪುರಸಭೆ ಆಡಳಿತ ಮಂಡಳಿ ಸಮರೋಪಾದಿಯಲ್ಲಿ ಕಾರ್ಯ ಸನ್ನದ್ಧವಾಗಿದ್ದು, ಪ್ರತಿ ವಾರ್ಡ್‍ಗಳಲ್ಲಿಯೂ ರಾಸಾಯನಿಕ ಸಿಂಪರಣೆಗೆ ಮುಂದಾಗಿದೆ.
ಪುರಸಭೆ ಅದ್ಯಕ್ಷೆ ಗದ್ದೆಮ್ಮಾ ಭೋವಿ, ಉಪಾದ್ಯಕ್ಷ ಮಹ್ಮದ್ ರಫಿ ಹಾಗೂ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ರಾಸಾಯನಿಕ ಸಿಂಪರಣೆ ಯಂತ್ರದ ಕಾರ್ಯಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಮುಖ್ಯಾಧಿಕಾರಿ, ಪಟ್ಟಣದಲ್ಲಿ ಪಾಸಿಟಿವ್ ಬಂದ ರೋಗಿಗಳ ಮನೆಗಳ ಸುತ್ತಮುತ್ತ, ಕೋವಿಡ್ ಕೇರ್ ಸೆಂಟರ್, ಆಸ್ಪತ್ರೆಗಳು, ಸಾರ್ವಜನಿಕ ಸ್ಥಳಗಳು ಸೇರಿ ವಾರ್ಡ್‍ಗಳಲ್ಲಿಯೂ ಕೆಮಿಕಲ್ ಮಿಶ್ರಿತ ರಾಸಾಯನಿಕವನ್ನು ಸಿಂಪರಣೆ ಮಾಡಲಾಗುವುದು. ಇದಕ್ಕಾಗಿ ಹೊಸ ಯಂತ್ರವನ್ನು ಖರೀದಿಸಲಾಗಿದ್ದು, ಟ್ರಾಕ್ಟರ್‍ಗೆ ಅಳವಡಿಸಿ ಪುರಸಭೆ ವ್ಯಾಪ್ತಿಯಲ್ಲಿ ಸಿಂಪರಣೆ ಮಾಡಲಾಗುವುದು ಎಂದು ಹೇಳಿದರು.
ಪುರಸಭೆ ಸಿಬ್ಬಂಧಿಗಳಾದ ರಾಜಶೇಖರ್, ಗಿರಿಜಾ, ರಾಘವೇಂದ್ರ, ಶಾನವಾಜ್, ಕುಬೇರಪ್ಪ ಸೇರಿ ಇತರರು ಈ ಸಂದರ್ಭದಲ್ಲಿ.

