ಗಾಣದಾಳ ಹುಟ್ಟುಹಬ್ಬ : ಸಸಿ ನೆಟ್ಟು, ಆಸ್ಪತ್ರೆಯಲ್ಲಿ ಹಣ್ಣು ವಿತರಣೆ
ಲಿಂಗಸುಗೂರು : ಕರುನಾಡ ವಿಜಯಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಕರ್ನಾಟಕ ಉಸ್ತುವಾರಿ ಶಿವಪುತ್ರ ಗಾಣದಾಳ ಅವರ ಹುಟ್ಟುಹಬ್ಬದ ನಿಮಿತ್ಯ ಪಟ್ಟಣದ ವಿವಿದೆಡೆ ಸಂಘಟನೆ ಕಾರ್ಯಕರ್ತರು ಸಸಿ ನೆಡುವ ಮೂಲಕ ಪರಿಸರ ಸ್ನೇಹಿಯಾಗಿ ಆಚರಣೆ ಮಾಡಿದರು. ಜೊತೆಗೆ ಸರಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಬೇಗ ಚೇತರಿಸಿಕೊಳ್ಳುವಂತೆ ಹರಸಿ, ಹಣ್ಣು-ಹಂಪಲು ವಿತರಣೆ ಮಾಡಿದರು.
ಸರಕಾರಿ ಕಾಲೇಜು ಆವರಣ, ಡಿವೈಎಸ್‍ಪಿ ಸೇರಿ ಹಲವು ಕಡೆಗಳಲ್ಲಿ ನೂರಾರು ಸಸಿಗಳನ್ನು ಸಂಘಟನೆಯ ಕಾರ್ಯಕರ್ತರು ಉತ್ಸಾಹದಿಂದ ನೆಟ್ಟರು.
ಸಂಘಟನೆಯ ಜಿಲ್ಲಾಧ್ಯಕ್ಷ ಚಂದ್ರಶೇಖರ ನಾಯಕ, ತಾಲೂಕು ಅದ್ಯಕ್ಷ ರಮೇಶ ಸುಂಕದ, ಮುತ್ತಣ್ಣ ಗುಡಿಹಾಳ, ಶರಣಬಸವ ಈಚನಾಳ, ಕುಮಾರಸ್ವಾಮಿ, ಚಂದ್ರು ಹಿರೇಮಠ, ವೀರೇಶ ಮಡಿವಾಳ, ಸುನೀಲ್, ಸಿದ್ಧು, ಹುಲಗಪ್ಪ, ಶಶಿಕುಮಾರ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಇದ್ದರು.

