ರಾಯಚೂರು

ಮೆಡಿಕಲ್ ಎಮರ್ಜೆನ್ಸಿ ಬೋರ್ಡ್ ಹಾಕಿ ವಂಚನೆ : ಕಾರು ಜಪ್ತಿ

ಲಿಂಗಸುಗೂರು : ಲಾಕ್‍ಡೌನ್ ವೇಳೆ ಖಾಸಗಿ ವಾಹನಗಳ ಸಂಚಾರವನ್ನು ನಿರ್ಭಂದಿಸಿದ್ದ ಹಿನ್ನೆಲೆಯಲ್ಲಿ ಮೆಡಿಕಲ್ ಎಮರ್ಜೆನ್ಸಿ ಬೋರ್ಡ್ ಹಾಕಿಕೊಂಡು ವಂಚಿಸುತ್ತಿದ್ದ ಕಾರೊಂದನ್ನು ಸ್ಥಳೀಯ ಪೋಲಿಸರು ಜಪ್ತಿ ಮಾಡಿದ್ದಾರೆ.

ಈ ಹಿಂದೆ ವೈದ್ಯಕೀಯ ಇಲಾಖೆಯವರು ಈ ಕಾರನ್ನು ಬಾಡಿಗೆ ಪಡೆದಿದ್ದಾಗ ಮೆಡಿಕಲ್ ಚೀಟಿಯನ್ನು ಅಂಟಿಸಿದ್ದರು. ಆದರೆ, ಈಗ ಸ್ವಂತಕ್ಕೆ ಉಪಯೋಗಿಸಿಕೊಳ್ಳುತ್ತಿರುವ ವ್ಯಕ್ತಿ ಅಂಟಿಸಿದ ಚೀಟಿಯನ್ನು ತೆಗೆಯದೇ ಹಾಗೆಯೇ ಓಡಾಟ ಮಾಡುವ ಮೂಲಕ ಕೋವಿಡ್ ನಿಯಮವನ್ನು ಉಲ್ಲಂಘನೆ ಮಾಡಿದ್ದಾನೆಂದು ಆರೋಪಿಸಿ ಕಾರು ಚಾಲನೆ ಮಾಡುವಾಗಲೂ ಮಾಸ್ಕ್ ಧರಿಸದೇ ಇದ್ದ ಚಾಲಕ ಇರ್ಫಾನ್ ಅಮೀನಗಡ ಎನ್ನುವ ಯುವಕನ ಮೇಲೆ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!