ಬಾಲಕಿಯರ ಹಾಸ್ಟೆಲ್ ಬಳಿ ಶೌಚಾಲಯ ನಿರ್ಮಾಣ : ಸ್ಥಳಾಂತರಕ್ಕೆ ಆಗ್ರಹ
ಲಿಂಗಸುಗೂರು : ಸ್ಥಳೀಯ ಪಶು ಆಸ್ಪತ್ರೆ ಹತ್ತಿರದ ಬಾಲಕಿಯರ ಹಾಸ್ಟೆಲ್ ಬಳಿ ನಿರ್ಮಾಣವಾಗುತ್ತಿರುವ ಶೌಚಾಲಯ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಕಾಮಗಾರಿಯನ್ನು ಸ್ಥಳಾಂತರ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಶೆಟ್ಟಿಬಣ) ಕಾರ್ಯಕರ್ತರು ಆಗ್ರಹಿಸಿದರು.
ಸಮಾಜ ಕಲ್ಯಾಣ ಇಲಾಳೆ ಅಧಿಕಾರಿಗೆ ಮನವಿ ಸಲ್ಲಿಸಿದ ಅವರು, ವಸತಿ ನಿಲಯಕ್ಕೆ ವಿದ್ಯಾರ್ಥಿನಿಯರು ತೆರಳುವ ಮಾರ್ಗದಲ್ಲಿ ಶೌಚಾಲಯ ನಿರ್ಮಾಣದಿಂದ ಸುತ್ತಮುತ್ತಲ ವಾತಾವರಣ ಕಲುಶಿತಗೊಳ್ಳುವುದಲ್ಲದೇ, ಈ ರಸ್ತೆಯಲ್ಲಿ ಹೆಣ್ಣುಮಕ್ಕಳು ಓಡಾಡಲಿಕ್ಕೆ ಮುಜುಗುರ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೂಡಲೇ ಶೌಚಾಲಯ ನಿರ್ಮಾಣವನ್ನು ಸ್ಥಗಿತಗೊಳಿಸಿ, ಅದನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು.
ಕರವೇ ತಾಲೂಕು ಅಧ್ಯಕ್ಷ ಆಂಜನೇಯ ಭಂಡಾರಿ, ಭೀಮೇಶ ನಾಯಕ, ಸಿದ್ಧು ಮುರಾರಿ, ನಾಗರಾಜ ನಾಯಕ ಈ ಸಂದರ್ಭದಲ್ಲಿ ಇದ್ದರು.

