ರಾಜ್ಯ

ಹುತಾತ್ಮ ದಿನ – ಬೆಂಗಳೂರು ಉಪವಾಸ ಸತ್ಯಾಗ್ರಹ – ರೈತರಿಗೆ ವ್ಯಾಪಕ ಬೆಂಬಲ – ರೈತ ಕಾರ್ಮಿಕರ ಸಖ್ಯತೆಗೆ ಕರೆ

ಬೆಂಗಳೂರು : ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾದ ಕರೆಯ ಮೇರೆಗೆ ಬೆಂಗಳೂರು ನಗರದಲ್ಲಿ ಇಂದು 30.01.2021 ಮಹಾತ್ಮಾ ಗಾಂಧಿಯವರ ಹುತಾತ್ಮ ದಿನದಂದು “ಸಂಯುಕ್ತ ಹೋರಾಟ”ದ ಅಡಿಯಲ್ಲಿ ‘ಸಂಘರ್ಷ ಸಂಕಲ್ಪ ದಿನ’ದ ಅಂಗವಾಗಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ಉಪವಾಸ ಸತ್ಯಾಗ್ರಹ ಆಚರಿಸಲಾಯಿತು.

ಸುಮಾರು 200 ಕ್ಕೂ ಹೆಚ್ಚು ಜನರು ಸೇರಿದ್ದ ಈ ಸತ್ಯಾಗ್ರಹದಲ್ಲಿ ಕೆ.ಆರ್.ಆರ್.ಎಸ್.ನ ಬಡಗಲಪುರ ನಾಗೇಂದ್ರ, ಕೋಡಿಹಳ್ಳಿ ಚಂದ್ರಶೇಖರ್, ವೀರಸಂಗಯ್ಯ, ಪೂಣಚ್ಚ; ಕೆ.ಪಿ.ಆರ್.ಎಸ್. ನ ಎನ್.ವೆಂಕಟಾಚಲಯ್ಯ, ಚಂದ್ರು ತೇಜಸ್ವಿ, ಯಶವಂತ ಮದ್ದೂರು; ಕ.ರಾ.ಕೃ.ಕೂ.ಸಂಘದ ನಿತ್ಯಾನಂದಸ್ವಾಮಿ, ಡಿ.ಎಸ್.ಎಸ್.(ಅಂಬೇಡ್ಕರ್ ವಾದಿ) ಮಾವಳ್ಳಿ ಶಂಕರ್, ಸಿ.ಐ.ಟಿ.ಯು.ನ ಮೀನಾಕ್ಷಿ ಸುಂದರಂ, ಕೆ.ಎನ್.ಉಮೇಶ್, ಕೆ.ಪ್ರಕಾಶ್, ಬಿ.ಎನ್.ಮಂಜುನಾಥ್; ಜನವಾದಿ ಮಹಿಳಾ ಸಂಘಟನೆಯಿಂದ ಗೌರಮ್ಮ, ಕೆ.ಎಸ್.ವಿಮಲಾ, ಕೆ.ಎಸ್.ಲಕ್ಷ್ಮಿ, ಲಲಿತಾ ಶೆಣೈ; ಡಿ.ಹೆಚ್.ಎಸ್.ನ ಬಿ.ರಾಜಶೇಖರ್ ಮೂರ್ತಿ, ಬಿಜಿವಿಎಸ್ ನ ಆರ್.ರಾಮಕೃಷ್ಣ, ಸಮಕಾಲೀನರು ಬಿ.ಆರ್.ಮಂಜುನಾಥ್, ಸಮುದಾಯ ಕರ್ನಾಟಕದ ಟಿ.ಸುರೇಂದ್ರ ರಾವ್, ಎಂ.ಜಿ.ವೆಂಕಟೇಶ್; ಇಪ್ಟಾದ ಶಶಿಕಾಂತ ಯಡಹಳ್ಳಿ, ಚಿಂತಕರಾದ ಡಾ.ವಿಜಯಾ, ಜಿ.ಎನ್.ನಾಗರಾಜ್, ಸುಕನ್ಯಾ ಮಾರುತಿ, ಜೆ.ಲೋಕೇಶ್, ಸಿರಿಗೆರೆ ನಾಗರಾಜ್, ಟಿ.ಆರ್.ಚಂದ್ರಶೇಖರ್, ಎಸ್.ಆರ್.ಹಿರೇಮಠ್; ಕರ್ನಾಟಕ ಜನಶಕ್ತಿಯ ಹೆಚ್.ವಿ.ವಾಸು, ಎ.ಐ.ಡಿ.ಎಸ್.ಒ.ದ ರಾಜಶೇಖರ್, ಎ.ಐ.ಎಂ.ಎಸ್.ಎಸ್.ನ ಸೀಮಾ, ಎಸ್.ಎಫ್.ಐ.ನ ಶಿವಕುಮಾರ ಮ್ಯಾಗಳಮನಿ, ಭೀಮನ ಗೌಡ, ದಿಲೀಪ ಶೆಟ್ಟಿ, ಕೆವಿಸ್ ಸಂಘಟನೆಯ ಸರೋವರ ಬೆಂಕಿಕೆರೆ, ಎಯ್.ವೈ.ಎಫ್.ನ ಹರೀಶ್ ಬಾಲು ಸೇರಿ ಮುಂತಾದವರು ಪಾಲ್ಗೊಂಡಿದ್ದರು.

ಮಾಜಿ ಮುಖ್ಯಮಂತ್ರಿಗಳು ಹಾಲಿ ವಿರೋಧ ಪಕ್ಷದ ನಾಯಕರಾಗಿರುವ ಶ್ರೀಯುತ ಸಿದ್ದರಾಮಯ್ಯನವರು ಭೇಟಿ ನೀಡಿ ತಮ್ಮ ಶುಭಾಶಯಕ ಕೋರಿ ಮಾತನಾಡಿದರು.

ಯಾವುದೇ ಕಾರಣಕ್ಕೂ ಆ ಕೃಷಿ ಕಾಯಿದೆಗಳನ್ನು ಹಿಂತೆಗೆದುಕೊಳ್ಳದೇ ಹೋರಾಟವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಎಲ್ಲರೂ ಒಕ್ಕೊರಲಿನಿಂದ ಘೋಷಿಸಿದರು. ಈ ಹೋರಾಟವನ್ನು ರಾಜ್ಯದ ಹಳ್ಳಿಗಳಿಗೂ ವಿಸ್ತರಿಸಬೇಕು ಮತ್ತು ಮುಂದಿನ ಹೋರಾಟಗಳಲ್ಲಿ ಕಾರ್ಮಿಕ ವರ್ಗದವರನ್ನೂ ಒಳಗೊಳ್ಳಬೇಕೆಂದು ಬಹುತೇಕರು ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!