ರಾಜ್ಯ

ಪ್ರಧಾನಿ ಮೋದಿಗೆ ವಿಭಿನ್ನವಾಗಿ ಅಭಿನಂದನೆ ಸಲ್ಲಿಸಿದ ವೆಲ್ಫೇರ್ ಪಾರ್ಟಿ ರಾಜ್ಯ ಅಧ್ಯಕ್ಷ ತಾಹೀರ್ ಹುಸೇನ್

ಬೆಂಗಳೂರು : ಕೇಂದ್ರದಲ್ಲಿ ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿಯವರ ಆಡಳಿತದ ಬಗ್ಗೆ, ಅವರು ಕೈಗೊಂಡ ನಿರ್ಣಯಗಳ ಬಗ್ಗೆ ಕರ್ನಾಟಕ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹಿರ್ ಹುಸೇನ್ ವಿಭಿನ್ನವಾಗಿ ಅಭಿನಂದನೆ ಸಲ್ಲಿಸಿದಾರೆ, ಜೊತೆಗೆ ಸಂತ್ರಸ್ತ ದೇಶದ ಒಂದೇ ಮೊರೆ ಅಧಿಕಾರ ಬಿಡಿ ಮೋದಿ ದೊರೆ ಎನ್ನುವ ಘೋಷಣೆಯನ್ನು ಮೊಳಗಿಸಿದ್ದಾರೆ.

ಎರಡನೇ ಅವಧಿಗೆ ಆಯ್ಕೆಯಾಗಿರುವ ಮೋದಿಯವರು ಎರಡು ವರ್ಷ ಆಡಳಿತ ಪೂರ್ತಿಸಿದ್ದಾರೆ. ಅದಕ್ಕಾಗಿ ದೇಶದೆಲ್ಲೆಡೆ ಅಭಿನಂದನೆಗಳು ಸಲ್ಲಿಕೆಯಾಗುತ್ತಿವೆ. ಈ ನಿಟ್ಟಿನಲ್ಲಿ ನಾವು ಕೂಡ ಅಭಿನಂದನೆಯನ್ನು ಸಲ್ಲಿಸೋಣ. ಕಳೆದ 70 ವರ್ಷಗಳಿಂದ ಯಾರೂ ಮಾಡದಂತಹ ಸಾಧನೆಯನ್ನು ಪ್ರಧಾನಿ ಮೋದಿಯವರು ಮಾಡಿದ್ದಾರೆ. ವಿಶ್ವದ ಬಡ ರಾಷ್ಟ್ರಗಳಾದ ಕೀನ್ಯ ದೊಂದಿಗೆ ಹೋಲಿಸಿಕೊಳ್ಳುವ ಸಾಧನೆ ಮಾಡಿದ್ದಾರೆ ಆದ್ದರಿಂದ ಅವರಿಗೆ ಅಭಿನಂದನೆಗಳು. ದೇಶದ ಆರ್ಥಿಕ ಪರಿಸ್ಥಿತಿ ನೆಲಕಚ್ಚು ತ್ತಿದೆ. ನಮ್ಮ ದೇಶದ ಜಿಡಿಪಿ ದರ ಬಾಂಗ್ಲಾದೇಶ ಕ್ಕಿಂತ ಕಡಿಮೆಯಾಗಿದೆ. ಇದಕ್ಕಾಗಿ ನಾವು ಪ್ರಧಾನಿಯವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ. ನೋಟು ಅಮಾನೀಕರಣ ಮಾಡಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ನೆಲಕಚ್ಚುವಂತೆ ಮಾಡಿದ್ದೀರಿ ಅದಕ್ಕೆ ನಿಮಗೆ ಅಭಿನಂದನೆಗಳು. ಕೊರೋನ ಎರಡನೇ ಅಲೆ ಬರುವ ಬಗ್ಗೆ ನಿಮಗೆ ಮಾಹಿತಿ ಇತ್ತು. ಆದರೂ, ಅದನ್ನು ಮರೆಮಾಚಿ ಚುನಾವಣೆಯಲ್ಲಿ ತಲ್ಲೀನರಾದಿರಿ. ಚುನಾವಣಾ ರ್ಯಾಲಿಗಳಲ್ಲಿ ಜನರಿಂದ ಕೇಕೆ ಹಾಕಿಸಿಕೊಂಡು ಬೀಗುತ್ತಿದ್ರಿ. ದೇಶದ ಜನ ಮಾತ್ರ ಆಸ್ಪತ್ರೆಗೆ ಅಲೆದಾಡುತ್ತಲೇ ಇದ್ದರು ಇದಕ್ಕಾಗಿ ನಿಮಗೆ ಅಭಿನಂದನೆಗಳು.

ಮೊದಲನೇ ಅಲೆ ಬಂದು ಹೋದ ಮೇಲೆ ವ್ಯಾಕ್ಸಿನ್ ಇಲ್ಲದೆ ನಾವು ಕೋರೋನಾ ಗೆದ್ದಿದ್ದೇವೆ ಎಂದು ಸುಳ್ಳು ಹೇಳಿ ಜನರಿಗೆ ವಂಚಿಸಿದ್ದೀರಿ ಅದಕ್ಕಾಗಿ ನಿಮಗೆ ಅಭಿನಂದನೆಗಳು. ದೇಶದ ಜನ ಸಂಕಷ್ಟದಲ್ಲಿರುವಾಗ ಅವರ ನೆರವಿಗೆ ಧಾವಿಸುವುದು ಬಿಟ್ಟು ಮೊಸಳೆ ಕಣ್ಣೀರು ಹಾಕುವುದರಿಂದ ಯಾವುದೇ ಪ್ರಯೋಜನ ಇಲ್ಲ. ಸಮರ್ಥ ನಾಯಕನಾದವನು ಜನರ ರಕ್ಷಣೆಗೆ ಧಾವಿಸುತ್ತಾನೆ ಹೊರತು ಕಣ್ಣೀರು ಹಾಕುತ್ತ ಕುಳಿತುಕೊಳ್ಳೋದಿಲ್ಲ ಜನರ ತೋರಿಕೆಗಾಗಿ ಕಣ್ಣೀರು ಸುರಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ.

ಪ್ರತಿವರ್ಷ ಎರಡು ಕೋಟಿ ಉದ್ಯೋಗದ ಸುಳ್ಳು ಭರವಸೆ ನಮಗೆ ಬೇಡ, ಭಾರತ ದೇಶಕ್ಕೆ 5 ಟ್ರಿಲ್ಲಿಯನ್ ಎಕಾನಮಿ ಮಾಡುವುದಾಗಿ ಹೇಳಿದ್ದೀರಿ ಅದು ನಮಗೆ ಬೇಡ, ಕಪ್ಪು ಹಣ ತಂದು 15 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದೀರಿ ಅದು ನಮಗೆ ಬೇಡ, ನಮ್ಮ ಒಂದೇ ಬೇಡಿಕೆ ನಿಮ್ಮ ಮುಂದೆ ಇಡುತ್ತಿದ್ದೇವೆ ದಯವಿಟ್ಟು ನೀವು ದೇಶದ ಗದ್ದುಗೆಯನ್ನು ಬಿಟ್ಟುಕೊಡಿ. ಸಂತ್ರಸ್ತ ದೇಶದ ಒಂದೇ ಮೊರೆ ಅಧಿಕಾರ ಬಿಟ್ಟುಬಿಡಿ ಮೋದಿ ದೊರೆ. ಇನ್ನೂ ಜನರಿಗೆ ಸಹಿಸಿಕೊಳ್ಳುವ ಶಕ್ತಿ ಇಲ್ಲ. ಆದ್ದರಿಂದ ಇವತ್ತಿನ ದಿನ ನೀವು ಜನರ ಕೂಗು ಕೇಳಿಸಿಕೊಂಡು ನೀವು ಸ್ಥಾನ ತ್ಯಜಿಸಿ ದೇಶದ ಜನತೆಯ ಮೇಲೆ ಇದೊಂದು ಉಪಕಾರ ಮಾಡಿದರೆ ಸಾಕು. ದೇಶದ ಜನ ನಾವು ಹೇಗೋ ಬದುಕಿಕೊಳ್ಳುತ್ತೇವೆ. ದಯವಿಟ್ಟು ಜನರ ಮೊರೆ ಕೇಳಿ. ಎಂದು ತೀಕ್ಷಣವಾಗಿ ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!